‘ಪ್ರೀತಿ ಗೀತಿ ಇತ್ಯಾದಿ’ ಹಾಡುಗಳ ಸಿಡಿ

  • IndiaGlitz, [Tuesday,January 28 2014]

ನಿರ್ದೇಶಕರಾಗಿ ಪ್ರೂವ್ ಮಾಡಿದ ಪವನ್ ವಡೆಯರ್ ನಾಯಕರಾಗಿರುವ ಚಿತ್ರ ‘ಪ್ರೀತಿ ಗೀತಿ ಇತ್ಯಾದಿ’ ಹಾಡುಗಳ ಸಿ ಡಿ ಬಿಡುಗಡೆ ಹಂತಕ್ಕೆ ಬಂದು ತಲುಪಿದೆ. ಫೆಬ್ರವರಿ ಆರರಂದು ಈ ಸಿನೆಮಾದ ಧ್ವನಿ ಸುರುಳಿ ಬಿಡುಗಡೆ ಆಗಲಿದೆ.‘ಪ್ರೀತಿ ಗೀತಿ ಇತ್ಯಾದಿ’ ಸಿನೆಮವನ್ನು ಹಾಕಿಕೊಂಡ ಸಮಯದಲ್ಲಿ ಮಾತಿನ ಭಾಗ ಹಾಗೂ ಕೆಲವು ಹಾಡುಗಳನ್ನು ಚಿತ್ರೀಕರಣ ಮಾಡಲಾಗಿದೆ. ಮತ್ತೊಬ್ಬ ಯೋಗರಾಜ್ ಭಟ್ ಅವರ ಶಿಷ್ಯ ವೀರೇಂದ್ರ ಅವರು ಈ ಚಿತ್ರದ ನಿರ್ದೇಶಕರು. ಪವನ್ ವಡೆಯರ್ ಅವರು ಈ ಸಿನೆಮಾದಲ್ಲಿ ಬಾರ್ ಒಂದರಲ್ಲಿ ಉದ್ಯೋಗಿ ಆಗಿ ಅಭಿನಯಿಸುತ್ತಿದ್ದಾರೆ.

ಮಾತಿನ ಭಾಗದ ಚಿತ್ರೀಕರಣ ಬೆಂಗಳೂರು, ಮೈಸೂರು, ತೀರ್ಥಹಳ್ಳಿ ಸ್ಥಳಗಳಲ್ಲಿ ಮಾಡಲಾಗಿದ್ದು ಕೇವಲ ಎಂಟು ಪಾತ್ರದಾರಿಗಳನ್ನು ಒಳಗೊಂಡ ಈ ‘ಪ್ರೀತಿ ಗೀತಿ ಇತ್ಯಾದಿ’ ಚಿತ್ರದ ನಾಯಕಿ ಸಂಗೀತ ಭಟ್. ಯೋಗರಾಜ್ ಭಟ್ ಅವರು ಒಳ್ಳೇದು ಹಾಗೂ ಕೆಟ್ಟದ್ದರ ಬಗ್ಗೆ ಒಂದು ಹಾಡನ್ನು ರಚಿಸಿದ್ದಾರೆ. ಬೆಳಗಾವಿ ಮೂಲದ ವಿಜಯಕುಮಾರ್ ಅವರು ಈ ಚಿತ್ರದ ನಿರ್ಮಾಪಕರು. ವೀರ ಸಮರ್ಥ ಅವರ ಸಂಗೀತವಿದೆ, ಭಾಸ್ಕರ್ ರೆಡ್ಡಿ ಅವರು ಛಾಯಾಗ್ರಾಹಕರು. ರಂಗಾಯಣ ರಘು, ವಿನಯಪ್ರಕಾಶ್, ಮಂಜುನಾಥ್ ಗೌಡ, ನಭ ನಟೇಶ್ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.